ಆಟೋಗ್ರಾ s ಪ್ಲೀಸ್ ವಿತ್ ಅನು
Posted date: 22/November/2010

ಸಿನೆಮಾ ತಾರೆಯರು ಅವರ ವೈಯಕ್ತಿಕ ಜೀವನ, ಹಲವಾರು ರೋಮಾಂಚಕ ಘಟನೆಗಳು, ಸಿಹಿ - ಕಹಿ
ಅನುಭವಗಳು ಅವರ ಹವ್ಯಾಸ ಆಸಕ್ತಿ ಮೊದಲಾದವುಗಳನ್ನು ತಿಳಿದುಕೊಳ್ಳುವುದೆಂದರೆ ಪ್ರತಿಯೊಬ್ಬರಿಗೂ
ಕುತೂಹಲವೇ ಅಲ್ಲವೇ. ಈಟೀವಿ ಕನ್ನಡ ವಾಹಿನಿಯು ಈಗ ಆಟೋಗ್ರಾಫ್ ಪ್ಲೀಸ್ ವಿಥ್ ಅನು ಎಂಬ
ಕಾರ್ಯಕ್ರಮವನ್ನು ಕಿರುತೆರೆಗೆ ಇದೇ ನವೆಂಬರ್ ೨೧ ರಂದು ಸಂಜೆ ೭-೦೦ ಗಂಟೆಗೆ ಪ್ರಸ್ತುತ ಪಡಿಸುತ್ತಿದೆ.
ಕನ್ನಡ ಚಲನಚಿತ್ರ ತಾರೆಯರ ನಟಿಸಿದ ಒಂದು ಜನಪ್ರಿಯ ಚಲನಚಿತ್ರದ ತುಣುಕು ಅಥವಾ ಹಾಡಿನೊಂದಿಗೆ
ಕಾರ್ಯಕ್ರಮಕ್ಕೆ ಆಹ್ವಾನಿಸಿ ಅವರು ಚಿತ್ರರಂಗಕ್ಕೆ ಪಾದಾರ್ಪಣೆ , ಅಭಿನಯಿಸಿದ ಪ್ರಥಮ ಚಿತ್ರ , ವಿಭಿನ್ನ
ಅನುಭವಗಳನ್ನು ನಿರೂಪಕಿ ಅನುಪ್ರಭಾಕರ್ ಜೊತೆಗೆ ಹಂಚಿಕೊಳ್ಳುವುದರ ಮೂಲಕ ಕಾರ್ಯಕ್ರಮ
ಆರಂಭವಾಗುತ್ತದೆ. ಮತ್ತು ಇಲ್ಲಿ ಭಾಗವಹಿಸುವ ತಾರೆಯರಿಗೆ ಅಚ್ಚರಿ ಎನಿಸುವಂತಹ ಸುತ್ತುಗಳು ಕಾದಿವೆ.
ಆಟೋಗ್ರಾಫ್ ಪ್ಲೀಸ್ ವಿತ್ ಅನು ಕಾರ್ಯಕ್ರಮವನ್ನು ನೋಡಿ ನಿಮ್ಮ ನೆಚ್ಚಿನ ತಾರೆಯರ ನಿಜ ಜೀವನ,
ಅನುಭವಗಳನ್ನು ತಿಳಿದು ನಕ್ಕು ನಲಿಯಲು ಪ್ರತಿ ಭಾನುವಾರ ಸಂಜೆ ೭-೦೦ ಗಂಟೆಗೆ ಈ ಕಾರ್ಯಕ್ರಮವನ್ನು ತಪ್ಪದೇ
ವೀಕ್ಷಿಸ್ತಿರಲ್ಲಾ?

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed